Dr: J S Patil : Lingayath is an independent religion | ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿದೆ - ಡಾ. ಜೆ ಎಸ್ ಪಾಟೀಲ

 *ಲಿಂಗಾಯತವು ಒಂದು ಸ್ವತಂತ್ರ ಧರ್ಮವಾಗಿದೆ*

                                                                                           

                                                                                           

1821 ರಲ್ಲಿ ಪ್ರಕಟವಾದ “ಹಿಂದೂ ನಡತೆ, ಸಂಪ್ರದಾಯಗಳು ಮತ್ತು ಸಮಾರಂಭಗಳು” ಎಂಬ ಶ್ರೀ ಅಬ್ಬೆ ಜೆ ಎ ದುಬೋಯಿಸ್ ಬರೆದ ಪುಸ್ತಕದಲ್ಲಿ “ಲಿಂಗಾಯತ ತತ್ವಶಾಸ್ತ್ರವು ಹಿಂದೂಗಳಿಗಿಂತ ಭಿನ್ನವಾಗಿದೆ” ಎಂದು ಉಲ್ಲೇಖಿಸಿದ್ದಾರೆ.                                                                                    

                                                                           1891ರ ಮೈಸೂರು ಜನಗಣತಿಯ ಸಾರಗಳ ಪ್ರಕಾರ ಲಿಂಗಾಯತವನ್ನು ಬ್ರಿಟಿಷ್ ಅವಧಿಯಲ್ಲಿ ಪ್ರತ್ಯೇಕ ಧರ್ಮವೆಂದು ಪರಿಗಣಿಸಲಾಗಿದೆ ಮತ್ತು ವಿಶೇಷವಾಗಿ ವೀರಶೈವವನ್ನು ಲಿಂಗಾಯತ ಧರ್ಮದ ಒಂದು ಉಪ ಪಂಗಡವೆಂದು ಪರಿಗಣಿಸಲಾಗಿದೆ.


ಮುಂಬೈ ಉಚ್ಛ ನ್ಯಾಯಾಲಯದ ಪ್ರಕರಣ ಸಂಖ್ಯೆ 45 ಹೇಳುವಂತೆˌ ಲಿಂಗಾಯತ ಸಿದ್ಧಾಂತಗಳು ಒಟ್ಟಾರೆಯಾಗಿ ಹಿಂದು ಸನಾತನ ವೈದಿಕ ಸಿದ್ಧಾಂತಗಳಿಗಿಂತ ಭಿನ್ನ ಮತ್ತು ಸ್ವತಂತ್ರವಾಗಿವೆ. ಲಿಂಗಾಯತ ಧರ್ಮವು ವೇದ ಮತ್ತು ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪುವುದಿಲ್ಲ. ಅಲ್ಲದೆˌ ಜಾತಿ ವ್ಯವಸ್ಥೆಯನ್ನು ನಿರಾಕರಿಸುತ್ತದೆ. ಹಾಗಾಗಿˌ ಲಿಂಗಾಯತವು ಒಂದು ಅವೈದಿಕ ಸ್ವತಂತ್ರ ಧರ್ಮವೆಂದು ಪರಿಗಣಿಸಬಹುದಾಗಿದೆ.

*ಎನ್ಸೈಕ್ಲೋಪೆಡಿಯಾ ಆಫ್ ರಿಲಿಜಿಯನ್ ಆಫ್ ಎಥಿಕ್ಸ್ ˌ ಲೇಖಕರು: ಆರ್ ವಿ ಎಥೋವನ್ˌ 1951* ಪುಸ್ತಕವು ಸ್ಪಷ್ಟವಾಗಿ ಲಿಂಗಾಯತರು ಹಿಂದುಗಳಲ್ಲವೆಂದು ಹೇಳುತ್ತದೆ.


ಹಿಂದೂ ಕಾನೂನು 1955ˌ ಆಕ್ಟ್  ಸಂಖ್ಯೆ 25, ಭಾರತೀಯ ಸಂಸತ್ತು ಗುರುತಿಸಿದಂತೆ ಲಿಂಗಾಯತ ಧರ್ಮಿಯರು ಹಿಂದೂಗಳಿಗಿಂತ ಭಿನ್ನ ನಂಬಿಕೆಗಳನ್ನು ಹೊಂದಿದ್ದಾರೆ ಎನ್ನುತ್ತದೆ.


ಹಿಂದೂ ಕಾನೂನು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯಿಸದೆ ಅದು ಸಿಖ್ˌ ಜೈನˌ ಬುದ್ದ ಧರ್ಮಿಯರಿಗೂ ಅನ್ವಯವಾಗುತ್ತದೆ. ಈ ಕಾನೂನು ಜಾತಿ ವ್ಯವಸ್ಥೆಯನ್ನು ನಿರಾಕರಿಸುತ್ತ ಅದರ ಸಿಂಧುತ್ವವನ್ನು ಪ್ರಶ್ನಿಸುವ ಲಿಂಗಾಯತ ಭಿನ್ನಮತಿಯರಿಗೂ ಅನ್ವಯವಾಗುತ್ತದೆ. *ಹಿಂದೂ ಲಾˌ ರಾಘವಾಚಾರ್ಯ. ಪ್ರೊ. ವೆಂಕಟರಾಮನ್ ಅವರಿಂದ ಪರಿಸ್ಕರಿಸಲಾಗಿದೆ*


ಇದಕ್ಕೆ ಶರಣರ ವಚನಗಳಲ್ಲಿ ಸಾಕಷ್ಟು ಪುರಾವೆಗಳಿವೆ : 


🔸ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದರು

🔹ಲಿಂಗಾಯತರು ಹಿಂದೂಗಳಲ್ಲ

🔸ಲಿಂಗಾಯತರು ವೀರಶೈವರಲ್ಲ


ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸುವ, ಶರಣರ ವಚನಗಳನ್ನು ಅನುಸರಿಸುವ ಮತ್ತು ಬಸವಣ್ಣನವರನ್ನು ಧರ್ಮಗುರುವಾಗಿ ಸ್ವೀಕರಿಸುವವರೆಲ್ಲರೂ ಲಿಂಗಾಯತರು.


ಲಿಂಗಾಯತರು ಸ್ವತಂತ್ರ ಧರ್ಮದ ಸ್ಥಾನಮಾನವನ್ನು ಪಡೆಯುವುದು ಕೇವಲ ಮೀಸಲಾತಿ ಪ್ರಯೋಜನಗಳಿಗಾಗಿ ಅಲ್ಲ. ಆದರೆ ಇದು ಲಿಂಗಾಯತರ ಗುರುತಿಸುವಿಕೆ ಮತ್ತು ಅಸ್ಮಿತೆಯ ಹೆಚ್ಚುಗಾರಿಕೆಯಾಗಿದೆ.


*ಎಡ್ಗರ್ ಥರ್ಸ್ಟನ್ (ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟು ಜನಾಂಗ, 1909) ಹೇಳುವಂತೆ, ಲಿಂಗಾಯತ ಧರ್ಮವು ಹಿಂದೂ ಧರ್ಮದ ಮಿತಿಯಿಲ್ಲದ ಸಮುದ್ರದೊಳಗೆ ಎಸೆಯಲ್ಪಟ್ಟ ದ್ವೀಪವಾಗಿದೆ. ಹಿಂದೂ ಎನ್ನುವ ಮೌಢ್ಯಯುಕ್ತ ಉಪ್ಪು ನೀರು ಅದರ ಭದ್ರವಾದ ಅಡಿಪಾಯವನ್ನು ಹಾಳುಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದೆ*


~ ಡಾ. ಜೆ ಎಸ್ ಪಾಟೀಲ.

Comments

Popular posts from this blog